ಬಲೂನ್ -
ವಾಯುಮಂಡಲದ ಮೂಲಕ ಸಂಚರಿಸಲು ಬಳಸುವ ವಾಹನ, ಆಕಾಶಬುಟ್ಟಿ ಪರ್ಯಾಯ ನಾಮ, ವಾಯುವಿಗಿಂತ ಹಗುರಾದ ಅನಿಲವನ್ನು ಧರಿಸಲು ಒಂದು ಭಾರಕ ಬಲೂನಿನ ಮುಖ್ಯ ಆಂಗ, ಅನಿಲಭರಿತ ಬಲೂನ್ ಸಮಗಾತ್ರದ ವಾಯವಿಗಿಂತ ಹಗುರವಾಗಿರುವುದರಿಂದ ತೇಲುವಿಕೆ ಸಾಧ್ಯವಾಗುತ್ತದೆ. ಅನಿಲದ ಈ ಚೀಲಕ್ಕೆ ಪಾವತಿಹೊರೆಯನ್ನು (ಪೇಲೋಡ್) ಲಗತ್ತಿಸವುದು ವಾಡಿಕೆ. ಇದರಲ್ಲಿ ಉಪಕರಣಗಳು, ಪ್ರಯಾಣಿಕರನ್ನು ಒಯ್ಯಲು ಬುಟ್ಟಿ ಅಥವಾ ಸಂಪುಟ ಅಥವಾ 

	ಬೇರೇನಾದರೂ ವಾಯುವಿಗಿಂತ ಭಾರತದ ವಸ್ತುವನ್ನು ಇರಿಸಿರುವುದುಂಟು ಬಲೂನ್ ಗಾಳಿಯೊಡನೆ ಮುಕ್ತವಾಗಿ ತೇಲಬಹುದು ಅಥವಾ ಸಮರ್ಪಕ ನೋದನ (ಪ್ರೋಪಲ್ಮನ್) ಮತ್ತು ನೀಯಂತ್ರಣ ವ್ಯವಸ್ಥೆಯ ನೆರವಿನಿಂದ ಅದನ್ನು ಸಂಚಾಲಿಸಬಹುದು ಮತ್ತೆ ಉದ್ದಿಷ್ಟ ದಿಶಾಗಾಮಿಯಾಗುವಂತೆ ತಿರಿಗಿಸಬಹುದು.

	ಇಂದು ಹಾವವೀಕ್ಷೆಣೆಯಲ್ಲಿ ಬಲೂನೂಗಳನ್ನು ವಿಶೇಷವಾಗಿ ಬಳಸುತ್ತಾರೆ. ಇವುಗಳಿಗೆ ಪರೀಜ್ಞಾಪಿ (ಸೌಂಡಿಗ್) ಬಲೂನುಗಳೆಂದು ಹೆಸರು ರೇಡಿಯೊ ಸೌಂಡುಗಳು (ವಾಯುಮಂಡಲದಲ್ಲಿ ಬಲೂನ್ ಸಂಚರಿಸಿದ ಹಾಗೆ ಅಯ ಪ್ರದೇಶದ ಉಷ್ಣತೆ. ಸಮುದ್ರ ಮತ್ತು ಅದ್ರತೆಯ ಬಗ್ಗೆ ಮಾಹಿತಿಯನ್ನು ನೆಲಠಾಣೆಗೆ ರೇಡಿಯೊ ಸಂಜ್ಞಗಳ ಮೂಲಕ ಪ್ರೇಶಿಸುವ ಉಪಕರಣಗಳು) ಮತ್ತು ಇತರ ಉಪಯುಕ್ತ ಉಪಕರಣಗಳನ್ನು ಇವುಗಳ ಪಾವತಿ ಹೊರೆಯಲ್ಲಿ ಹಳವಡಿಸಲಾಗುವುದು. ನೀಯೊಪ್ರನ್ ಎಂಬ ಸಂಶ್ಲೇಷಿತ ರಬ್ಭರಿನಿಂದ ಇದನ್ನು ತಯಾರಿಸುವರು. ಇಂಥ ಒಂದು ಬಲೂನಿನ ಮುಖ್ಯ ವಿವರಗಳು ಹೀಗಿವೆ:
ತೂಕ
1000-1400g

ಪಾವತಿ ಹೊರೆ
1700 g 

ಮುಕ್ತ ಉತ್ತಾಪಕ ಬಲ(ಲೀಫ್ಟ)
1000-1500 g 

ಹೈಡ್ರೊಜನ್ ಪರಿಮಾಣ
2678 ಲೀಟರುಗಳು

ಪ್ರಾರಂಬಿಕ ವ್ಯಾಸ (ಸುಮಾರು)
2 ಮಿ

27450 ಮೀಟರ್ ಎತ್ತರದಲ್ಲಿ ವ್ಯಾಸ (ಸುಮಾರು)
8 ಮಿ

ಆರೋಹಣ ದರ (ಸುಮಾರು)
300 ಮಿ/ ಮಿನಿಟ್

ಏರಿದ ಎತ್ತರ 27450-30500 ಮೀ

ಕರ್ಯಾಗಳಲ್ಲಿಯೂ ಬಲೂನುಗಳನ್ನು ಬಳಸಿದರು. ಒಂದನೇಯ ಮಹಾಯುದ್ಧದಲ್ಲಿ ಇವನ್ನು ಬೀರುಗಾಳಿಗೆ ತೂರಿಹೋಗದ ಹಾಗೆ ಗಾಳಿಪಟ್ಟಗಳನ್ನು ಹಾರಿಸುವಂತೆ ಹಾರಿಸುತ್ತಿದ್ದರು. ಬ್ರಿಟಿಷರು ಶತ್ರು ಫಿರಂಗಿಗಳನ್ನು ನೀರಿಕ್ಷಿಸಲು ಮತ್ತು ಫಿರಂಗಿಗಳು ಶತ್ರುಗಳ ಮೇಲೆ ಎಂಥ ಪರಿಣಾಮ ಉಂಟುಮಾಡಿದವು ಎಂಬುದನ್ನು ನಿರ್ಮಿಸಿದ ಹಡಗುಳಿಂದ ಬಲೂನುಗಳನ್ನು ಮೇಲೆಕ್ಕೆ ಹಾರಿಸಿದರು. 

	ಬಲೂನ್ ಅಡ್ಡಗಟ್ಟು (ಬರಾಜ್)ಎನ್ನುವ ಇನ್ನೊಂದು ಪ್ರಯೋಗದಲ್ಲಿ ಕೂಡ ಬಲೂನುಗಳನ್ನು ಬಳಸಲಾಯಿತು. ಇದರ ಪ್ರಕಾರ ಒಂದು ಹಡಗಿನ ಅಕ್ಕಪಕ್ಕಗಳಲ್ಲು ಮಧ್ಯ ಭಾಗದಲು 305 ಮಿ ತಂತಿಗಳನ್ನು ಸೂತಿ ಅವುಗಳಿಗೆ 1135 ಘಮಿ ಅಳತೆಯುಳ್ಳ ಮೂರು ಆಕಾಶಬುಟ್ಟಿಗಳನ್ನು ಕಟ್ಟಿ 3050 ಮಿ ಎತ್ತರಕ್ಕೆ ಏರಿಸುತ್ತಿದ್ದರು. ಶತ್ರುವಿಮಾನಗಳು ಧಾಳಿಯಿಡದಂತೆ ನಡುವಿನ ಎಡೆಯಲ್ಲಿ ಅನೇಕ ಉಕ್ಕಿನ ತಂತಿಗಳನ್ನು ಬೀಗಿಯುತ್ತಿದ್ದರು. ವಿಮಾನಗಳು ಈ ತಂತಿ ಬಾಚನಿಗೆಗಳ ಹತ್ತಿರಕ್ಕೆ ಸುಳಿದರೆ ನಿಸ್ಸಂಶಯವಾಗಿ ಅವುಗಳಲ್ಲಿ ಸಿಕ್ಕಿಕೊಳ್ಳುತ್ತಿದ್ದುವು. 3050ಮೀ ಎತ್ತರದಿಂದ ಬಾಂಬ್ ಎಸೆದರೆ ಅವು ಗುರಿ ಮುಟ್ಟುವಂತೆ ಮಾಡುವುದು ಆ ಕಾಲದಲ್ಲಿ ಅಸಾಧ್ಯವಾಗಿತ್ತು. ಎರಡನೆಯ ಮಹಾಯುದ್ದದಲ್ಲಿ. ಮುಖ್ಯವಾಗಿ ಬ್ರಿಟನ್ನಿನ ಸಮರದಲ್ಲಿ. ಇವುಗಳ ಎತ್ತರದ ಪರಮ ಪ್ರಮಾಣವನ್ನು 4575 ಮೂಗಳೀಗೆ ಏರಿಸಲಾಯಿತು. ವಿನಾಶಕ ನೌಕೆಗಳಿಗೆ ಇದೇ ರೀತಿಯಲ್ಲಿ ಕಟ್ಟಿಮೇಲಕ್ಕೇರಿಸಿದ ಬಲೂನ್ ಅಡ್ಡಗಟ್ಟುಗಳು ಇಂಗ್ಲೀಷ್ ಕಡಲ್ಗಾಲುವೆಯ ಮೂಲಕ ಸಾಗುವ ವ್ಯಾಪಾರಿ ಹಡಗುಗಳ ರಕ್ಷಣೆಗೆ ಉಪಯುಕ್ತವೆನಿಸಿದುವು. ಇಂಥ ಬಲೂನ್ ಅಡ್ಡಗಟ್ಟುಗಳ ನಡುವೆ ತಮಗೆ ಅಪಾಯವಿಲ್ಲದೆ ತೂರಲು ಎಂಥ ಬಾಂಬರಿಗೇ ಆಗಲಿ ಧೈರ್ಯ ಬರುತ್ತಿರಲಿಲ್ಲ. ತೆಟ್ಟೆ ನೀರಿನಲ್ಲಿ ಮುಳುಗಿದ್ದ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚುವುದಕ್ಕೂ ಇವನ್ನು ಉಪಯೋಗಿಸುತ್ತಿದ್ದರು.

	ಪ್ರಚಾರ ಕಾರ್ಯಕ್ಕೆ ಬಲೂನುಗಳನ್ನು ನಿಯೋಜಿಸುವುದುಂಟು. ಶತ್ರುದೇಶಗಳ ಜನಕ್ಕೆ ಯುದ್ಧ ಪರಿಸ್ಥಿತಿಯನ್ನೂ ಅದರ ಉದ್ದೇಶವನ್ನೂ ತಿಳಿಯಪಡಿಸುವುದಕ್ಕೆ ಸಣ್ಣ ಸಣ್ಣ ಪುಸ್ತಕಗಳನ್ನೂ ಚೀಟಿಗಳನ್ನೂ ಬಲೂನುಗಳಿಂದ ಚೆಲ್ಲಿಕೊಡುತ್ತಿದ್ದರು. ಅದರೆ ಇವನ್ನು ಬಿರುಗಾಳಿ ಹಾರಿಸಿಕೊಂಡು ಹೋಗುವ ಸಂಭವವಿದ್ದೇ ಇತ್ತು. ಹಡಗುಗಳಿಗೆ ಎಷ್ಟೇ ಬಿಗಿಚಿiÀiÁಗಿ ಕಟ್ಟಿಹಾಕಿದಾಗ್ಯೂ ಚಂಡಮಾರುತಗಳಲ್ಲಿ ಅವು ತೂರಿಹೋಗುತ್ತವೆ. ಅಲ್ಲದೆ ಶತ್ರುವಿಮಾನಗಳು ಅವನ್ನು ಹೊಡೆದು ಹಾಕುವುದೂ ಸಾಧ್ಯ.

	ಅಧುನಿಕ ವಿಮಾನಗಳು ಬಳಕೆಗೆ ಬಂದಮೇಲೆ ಯುದ್ಧದಲ್ಲಿ ಬಲೂನುಗಳು ನಿರುಪಯುಕ್ತವೆನಿಸಿವೆ. ವಿಮಾನ ತುಂಬ ಎತ್ತರಕ್ಕೇರಬಲ್ಲದು. ಅಲ್ಲದೆ ಎಂಥ ಗುರಿಗಾಗಲಿ ನೇರವಾಗಿ ಹ್ರೆಡೆಯಲೂ ಬಲ್ಲುದು. ದೂರಹಾರುವ ಅಕಾಶ ಬಾಣಗಳು ಮತ್ತು ಕ್ಷಿಪಣಿಗಳು ಇತ್ಯಾದಿಗಳಿರುವಾಗ ಯುದ್ಧ ಪ್ರಸಂಗದ ಬಲೂನ್ ಈಗೊಂದು ಹಳೆಯ ನಿಷ್ಪ್ರಯೋಜಕವಸ್ತು.
(ಎ.ಎನ್.ಎಸ್.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ